Monday, 23 February 2026

ಭಾರತದ ಗೆಲುವಿನ ಓಟಕ್ಕೆ ದಕ್ಷಿಣ ಆಫ್ರಿಕಾ ತಡೆ || ಭಾರತದ ರೈಸಿಂಗ್ ಸ್ಟಾರ್ ಗೆ ಏಷ್ಯಾ ಕಪ್

 ಸೂಪರ್-8ರಲ್ಲಿ ಮುಗ್ಗಿರಿಸಿದ ಸೂರ್ಯ ಕುಮಾರ್ ಪಡೆ| 

  ಅಹಮದಾಬಾದ್ : ಐಸಿಸಿ ಟೂರ್ನಿಯಲ್ಲಿ ಸತತ 17 ಪಂದ್ಯ ಮತ್ತು ಟಿ20 ವಿಶ್ವಕಪ್ ನಲ್ಲಿ ಸತತ 12 ಪಂದ್ಯ ಗೆಲುವಿನ ಭಾರತದ ಓಟಕ್ಕೆ ಹರಿಣಗಳ ಪಡೆ ತಡೆಯುಡ್ಡಿದೆ. ಅನುಭವಿ ಡೇವಿಡ್ ಮಿಲ್ಲರ್ (63 ರನ್, 35 ಎಸೆತ, 7 ಬೌಂಡರಿ, 3 ಸಿಕ್ಸರ್) ಅಮೋಘ ಬ್ಯಾಟಿಂಗ್ ಹಾಗೂ ಬಾಲರ್ ಗಳ ಶಿಸ್ತು ಬದ್ಧ ದಾಳಿಯ ಎದುರು ಲಯ ತಪ್ಪಿದ ಆತಿಥೇಯ ಸೂರ್ಯ ಕುಮಾರ್ ಬಳಗ ಟಿ20 ವಿಶ್ವಕಪ್ 10ನೇ ಆವೃತ್ತಿಯ ಸೂಪರ್-8 ಹಂತದ  ತನ್ನ ಮೊದಲನೇ ಪಂದ್ಯದಲ್ಲಿ ಹಾಲಿ ರನ್ನರ್ ಅಪ್ ದಕ್ಷಿಣ ಆಫ್ರಿಕಾ ವಿರುದ್ಧ 76 ರನ್ ಗಳಿಂದ ಪ್ರಾರಂಭಗೊಂಡಿತು.


 ಇದರಿಂದ ಸೆಮಿಸ್ ರೇಸ್ ನಲ್ಲಿ ಸೂಪರ್-8 ಹಂತದ ಉಳಿದೆರಡು ಪಂದ್ಯಗಳು ಟೀಮ್ ಇಂಡಿಯ ಪಾಲಿಗೆ ಮಾಡು ಇಲ್ಲವೇ ಮಡಿ ಎನಿಸಿವೆ.
ನಮೋ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಗ್ರೂಪ್-1ರ ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ಆಯ್ದುಕೊಂಡಿತ್ತು. ವೇಗಿ ಜಸ್ ಪ್ರೀತ್ ಬುಮ್ರಾ (15 ಕ್ಕೆ3) ಕರಾರುವಾಕ್ ದಾಳಿಗೆ ಆರಂಭಿಕ ಅಪಘಾತ ಎದುರಿಸಿದ ಹರಿಣಗಳ ಪಡೆ 20 ರನ್‌ಗಳಿಗೆ ಅಗ್ರ 3 ವಿಕೆಟ್ ಕೈ ಚೆಲ್ಲಿತು.
 ಆಗ, ಡೇವಿಡ್ ಮಿಲ್ಲರ್  ಹಾಗೂ ಡಿವಾಲ್ಡ್ ಬ್ರೆವಿಸ್ (45 ರನ್, 29 ಎಸೆತ,3 ಬೌಂಡರಿ, 3 ಸಿಕ್ಸರ್)ನಡೆಸಿದ ಬಿರುಸಿನ ಜತೆಯಾಟದಿಂದ ಚೇತರಿಸಿಕೊಂಡರೆ, ಸ್ಲಾಗ್ ಓವರ್ ಗಳಲ್ಲಿ ಟ್ರಿಸ್ಟಾನ್ ಸ್ಟಬ್ಸ್ (44 ⭐ ರನ್, 24 ಎಸೆತ,1 ಬೌಂಡರಿ, 1 ಸಿಕ್ಸರ್) ಉಪಯುಕ್ತ ಆಟದ ಬರದಿಂದ ಆಫ್ರಿಕಾ 7 ವಿಕೆಟ್ ಗೆ 187 ರನ್ ಗಳ ಸವಾಲಿನ ಮೊತ್ತ ಕಲೆ ಹಾಕಿತು.


 ಚುಟುಕು ಸಮರದಲ್ಲಿ ದಾಖಲೆಯ ಮತ್ತದ ಚೇಸಿಂಗ್ ಹೇಳಿದ ಭಾರತ ತಂಡ 51 ರನ್ ಗಳಿಂದ ಐದು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆಲ್ ರೌಂಡರ್ ಶಿವನದುಬೆ (45 ರನ್, 37 ಎಸೆತ,1 ಬೌಂಡರಿ,3 ಸಿಕ್ಸರ್)
 ಪ್ರತಿರೋಧ ಸೋಲಿನ ಅಂತರವನ್ನಷ್ಟೇ ತಗ್ಗಿಸಿತು. ಅಂತಿಮವಾಗಿ 18.5 ಓವರ್ ಗಳಲ್ಲಿ 111 ರನ್ಗಳಿಗೆ ಆಲ್ ಔಟ್ ಆದ ಭಾರತ ಸೋಲೊಪ್ಪಿಕೊಂಡಿತ್ತು. ಇದರೊಂದಿಗೆ 2024ರ ಟಿ20 ವಿಶ್ವಕಪ್ ಫೈನಲ್ ನ ಸೋಲಿಗೆ ಮಯ್ಯಿ ತೀರಿಸಿಕೊಂಡ ದಕ್ಷಿಣ ಆಫ್ರಿಕಾ ಸೂಪರ್-8 ರಲ್ಲಿ ಗೆಲುವಿನ ಆರಂಭ ಕಂಡಿತು. ಐಸಿಸಿ ಟೂರ್ನಿಯಲ್ಲಿ ಭಾರತಕ್ಕೆ ಇದು 2023ರ ಏಕದಿನ ವಿಶ್ವ ಕಪ್ ಫೈನಲ್ ಬಳಿಕ ಮೊದಲ ಸೋಲಾಗಿದೆ.

 ಪ್ರಮುಖ ಬ್ಯಾಟರಿಗಳ ವೈಫಲ್ಯಕ್ಕೆ ಸೋಲಿನ ಬರೆ 

ಹರಿಣಗಳಿಗೆ ಮಿಲ್ಲರ್ ರನ್ ಪವರ್

ಪವರ್ ಪ್ಲೇಯಲ್ಲಿ ಹರಿಣಗಳಿಗೆ ಆಘಾತ ನೀಡಿದ ಭಾರತ ತಂಡ ಏಡನ್ ಮಾಕ್ರ್ರಮ್ ನಿರ್ಧಾರ ತಲೆಕೆಳಗಾಗಿಸಿತು. ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ (47ಕ್ಕೆ 1) ದುಬಾರಿ ಎನಿಸಿದ ನಡುವೆಯೂ ಜಸ್ ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್ (28ಕ್ಕೆ 2) ಆಫ್ರಿಕನ್ನರಿಗೆ ಕಡಿವಾಣ ಹೇರಿದರು. ಎರಡನೇ ಓವರ್‌ನಲ್ಲಿ ಕ್ವಿಂಟನ್ ಡಿಕಾಕ್ ರನ್ನು (6) ಬೌಲ್ಡ್ ಮಾಡಿದ ಬುಮ್ರಾ, ಮರುಓವರ್‌ನಲ್ಲಿ ಲ್ಯಾನ್‌ ರಿಕೆಲ್‌ಟನ್ (7) ವಿಕೆಟ ಪಡೆದು ಭಾರತಕ್ಕೆ ಮೇಲುಗೈ ನೀಡಿದರು. ಈ ಮಧ್ಯೆ ಏಡನ್ ಮಾಕ್ರ್ರಮ್ (4) ವಿಕೆಟ್ ಕಬಳಿಸಿದ ಅರ್ಷದೀಪ್ ಅಗ್ರ ಕ್ರಮಾಂಕಕ್ಕೆ ಬ್ರೇಕ್‌ ಹಾಕಿದರು. ನಂತರ ಡಿವಾಲ್ಡ್ ಬ್ರೆವಿಸ್ ಹಾಗೂ ಡೇವಿಡ್ ಮಿಲ್ಲರ್ ಆಫ್ರಿಕನ್ನರ ಮೊತ್ತ ಏರಿಸಿದರು. ಇವರಿಬ್ಬರು 4ನೇ ವಿಕೆಟ್‌ಗೆ 51 ಎಸೆತಗಳಲ್ಲಿ 97 ರನ್ ಗಳಿಸಿ ಆತಿಥೇಯರಿಗೆ ಸವಾಲೊಡ್ಡಿದರು. ವರುಣ್ ಚಕ್ರವರ್ತಿಗೆ ಒಂದೇ ಓವರ್‌ನಲ್ಲಿ 16 ಬಾರಿಸಿದ ಬ್ರೆವಿಸ್, ಮಿಲ್ಲರ್‌ಗೆ ಉತ್ತಮ ಬೆಂಬಲ ನೀಡಿದರು. 13 ಓವರ್‌ನಲ್ಲಿ ಶಿವಂ ದುಬೆ ಈ ಜತೆಯಾಟ ಮುರಿದು ಸಮಾಧಾನ ತಂದರು. ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ಸ್ ಪರ ನಮೋ ಕ್ರೀಡಾಂಗಣದಲ್ಲಿ ಆಡಿದ ಅನುಭವ ಬಳಸಿದ ಮಿಲ್ಲರ್ 26 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ, 16ನೇ ಓವರ್‌ನಲ್ಲಿ ಚಕ್ರವರ್ತಿಗೆ ವಿಕೆಟ್ ಒಪ್ಪಿಸಿದರು. ಸ್ಲಾಗ್ ಓವರ್‌ಗಳಲ್ಲಿ ವಿಕೆಟ್ ಉರಳಿದರೂ, ಸ್ಟಟ್ಸ್ ಏಕಾಂಗಿಯಾಗಿ ಮೊತ್ತ ಏರಿಸಿದರು. ಹಾರ್ದಿಕ್ ಎಸೆದ ಕೊನೇ ಓವರ್‌ನಲ್ಲಿ 20 ರನ್ ಕಸಿದ ಆಫ್ರಿಕಾ ಮೊತ್ತವನ್ನು 190ರ ಸನಿಹಕ್ಕೇರಿಸಿತು. 



 ಭಾರತದ ರೈಸಿಂಗ್ ಸ್ಟಾರ್ ಗೆ ಏಷ್ಯಾ ಕಪ್

 ಫೈನಲ್ ನಲ್ಲಿ ಬಾಂಗ್ಲಾ ವಿರುದ್ಧ ಜಯಭೇರಿ |ತೇಜಲ್ ಗೆಲುವಿನಾಟ

ಬ್ಯಾಂಕಾಕ್: ತೇಜಲ್ ಹಸಬ್ಬಿಸ್ (51*ರನ್, 34 2, 3 . 2 ) ಅರ್ಧಶತಕದ ಆಸರೆ ಮತ್ತು ಸ್ಪಿನ್ನರ್ ಗಳ ಬಿಗಿ ಬೌಲಿಂಗ್ ದಾಳಿಯ ಬಲದಿಂದ ಭಾರತ ಎ ತಂಡ ಮಹಿಳೆಯರ ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್ ಟಿ20 ಟೂರ್ನಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿದೆ. ಬಾಂಗ್ಲಾದೇಶ ಎ ವಿರುದ್ಧ ಭಾನುವಾರ ನಡೆದ ಪ್ರಶಸ್ತಿ ಕಾದಾಟದಲ್ಲಿ ರಾಧಾ ಯಾದವ್ ನೇತೃತ್ವದ ಭಾರತ ಎ ತಂಡ 46 ರನ್‌ಗಳಿಂದ ಭರ್ಜರಿ ಗೆಲುವು ಸಾಧಿಸುವ ಮೂಲಕ ಈ ಸಾಧನೆ ಮಾಡಿದೆ. ಈ ಹಿಂದೆ ಎಮರ್ಜಿಂಗ್ ಏಷ್ಯಾಕಪ್ ಎಂಬ ಹೆಸರು ಹೊಂದಿದ್ದ ಈ ಟೂರ್ನಿಯಲ್ಲೂ ಭಾರತ ಪ್ರಶಸ್ತಿ ಜಯಿಸಿತ್ತು.




ಟೆರ್ಡ್ ಥಾಯಿ ಕ್ರಿಕೆಟ್ ಗ್ರೌಂಡ್ ನಲ್ಲಿ ನಡೆದ ಪ್ರಶಸ್ತಿ ಹೋರಾಟದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದ ಭಾರತ ತಂಡ, 44 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡು ಪರದಾಡಿತು. ಆಗ ಜತೆಗೂಡಿದ ತೇಜಲ್ ಮತ್ತು ನಾಯಕಿ ರಾಧಾ ಯಾದವ್ (36) 5ನೇ ವಿಕೆಟ್‌ಗೆ 69 ರನ್ ಜತೆಯಾಟವಾಡುವ ಮೂಲಕ ಭಾರತಕ್ಕೆ ಆಸರೆಯಾದರು. ಅಂತಿಮವಾಗಿ ಭಾರತ 7 ವಿಕೆಟ್‌ಗೆ 134 ರನ್‌ಗಳು ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತು. ಪ್ರತಿಯಾಗಿ ಪ್ರೇಮಾ ರಾವತ್ (12ಕ್ಕೆ 3), ತನುಜಾ ಕನ್ವರ್ (11ಕ್ಕೆ 2) ಮತ್ತು ಸೋನಿಯಾ ಮೆಂಧಿಯಲ್ಲಿ (21ಕ್ಕೆ 2) ಸ್ಪಿನ್ ದಾಳಿಗೆ ನಲುಗಿದ ಬಾಂಗ್ಲಾ 19.1 ಓವರ್‌ಗಳಲ್ಲಿ 88 ರನ್‌ಗಳಿಗೆ ಆಲೌಟ್ ಆಗಿ ಶರಣಾಯಿತು. ಅಜೇಯವಾಗಿ ಫೈನಲ್‌ಗೇರಿದ್ದ ಬಾಂಗ್ಲಾ, ಭಾರತೀಯರ ಸರ್ವಾಂಗೀಣ ಆಟದ ಎದುರು ಮಂಕಾಯಿತು. ಟೂರ್ನಿಯ ಮೊದಲ ಪಂದ್ಯದಲ್ಲಿ ಯುಎಇ ವಿರುದ್ಧ ಆಘಾತಕಾರಿ ಸೋಲು ಕಂಡಿದ್ದ ಭಾರತ, ನಂತರ ಸತತ 4 ಜಯದೊಂದಿಗೆ ಪ್ರಶಸ್ತಿ ಒಲಿಸಿಕೊಂಡಿರುವುದು ವಿಶೇಷ. 2023ರಲ್ಲಿ ನಡೆದ ಎಮರ್ಜಿಂಗ್ ಏಷ್ಯಾಕಪ್‌ನಲ್ಲೂ ಭಾರತ ತಂಡ ಫೈನಲ್‌ನಲ್ಲಿ ಬಾಂಗ್ಲಾದೇಶ ವಿರುದ್ಧವೇ ಗೆಲುವು ಸಾಧಿಸಿತ್ತು. 

ಭಾರತ ಎ: 7 ವಿಕೆಟ್‌ಗೆ 134 (ನಂದಿನಿ 8, ವೃಂದಾ ದಿನೇಶ್ 19, ಅನುಷ್ಕಾ ಶರ್ಮ 8, ತೇಜಲ್ 51*, ರಾಧಾ 36, ಪ್ರೇಮಾ 4, ಫಹಿಮಾ ಖತುನ್ 25ಕ್ಕೆ 4. ಫರ್ಜಾನಾ 30ಕ್ಕೆ 1), ಬಾಂಗ್ಲಾ ದೇಶ ಎ: 19.1 ಓವರ್‌ಗಳಲ್ಲಿ 88

(ಶಮಿಮಾ ಸುಲ್ತಾನಾ 20, ಸರ್ಮಿನ್ ಸುಲ್ತಾನಾ 18, ಸಾದಿಯಾ ಅಖೈರ್ 10, ಫಹಿಮಾ ಖತುನ್ 14, ಪ್ರೇಮಾ ರಾವತ್ 12ಕ್ಕೆ 3, ತನುಜಾ ಕನ್ವರ್ 11ಕ್ಕೆ 2, ಸೋನಿಯಾ 21ಕ್ಕೆ 2, ಮಿನ್ನು ಮಣಿ 17ಕ್ಕೆ 1, ರಾಧಾ 16ಕ್ಕೆ 1, ಸೈಮಾ 11ಕ್ಕೆ1). ಪಂದ್ಯಶ್ರೇಷ್ಠ: ತೇಜಲ್ ಹಸಬ್ಲಿಸ್.

No comments:

Post a Comment

ಭಾರತದ ಗೆಲುವಿನ ಓಟಕ್ಕೆ ದಕ್ಷಿಣ ಆಫ್ರಿಕಾ ತಡೆ || ಭಾರತದ ರೈಸಿಂಗ್ ಸ್ಟಾರ್ ಗೆ ಏಷ್ಯಾ ಕಪ್

 ಸೂಪರ್-8ರಲ್ಲಿ ಮುಗ್ಗಿರಿಸಿದ ಸೂರ್ಯ ಕುಮಾರ್ ಪಡೆ|    ಅಹಮದಾಬಾದ್ : ಐಸಿಸಿ ಟೂರ್ನಿಯಲ್ಲಿ ಸತತ 17 ಪಂದ್ಯ ಮತ್ತು ಟಿ20 ವಿಶ್ವಕಪ್ ನಲ್ಲಿ ಸತತ 12 ಪಂದ್ಯ ಗೆಲುವಿನ ಭಾರ...